ಶೂನ್ಯಪೀಠ ಪರಂಪರೆ - ಮುರಿಗಾ ಪರಂಪರೆ ಚಿತ್ರದುರ್ಗದ ಬೆಟ್ಟವನ್ನೇರಿ, ಸುಂದರವಾದ ಹೆಬ್ಬಂಡೆಗಳ ನಡುವೆ ಇರುವ ಸಂಪಿಗೆ ಸಿದ್ಧೇಶ್ವರ ದೇವಸ್ಥಾನದ ಪರಿಸರಕ್ಕೆ ಬಂದರೆ, ಅದರ ಮುಂದೆ ಪೂರ್ವಾಭಿಮುಖವಾಗಿ ಸಾಲುಕಂಬಗಳನ್ನುಳ್ಳ ಮುಖಮಂಟಪಶಾಲೆಯ ವಿಶಾಲ ಕಟ್ಟಡವೊಂದು ನೋಟಕರ ದೃಷ್ಟಿಯನ್ನು ಸೆಳೆಯುತ್ತದೆ. ಅದರೊಳಗೆ ಪ್ರವೇಶಿಸಿ ಒಂದು ಸುತ್ತು ಹಾಕಿ ಬಂದರೆ, ಅನೇಕ ಕಂಬಗಳು, ಅಂಕಣಗಳು, ಕೋಣೆಗಳಿಂದ ಕೂಡಿದ ಆ ಕಟ್ಟಡ ಹಿಂದೆ ಒಂದು ಕಾಲಕ್ಕೆ ಒಂದು ಪ್ರಮುಖ ಸ್ಥಳವಾಗಿದ್ದಿರಬೇಕು ಎಂಬ ಕಲ್ಪನೆ ಬರುತ್ತದೆ. ಇದೇ ಮೇಲುದುರ್ಗದ ಮುರುಘರಾಜೇಂದ್ರ ಬೃಹನ್ಮಠ. ಚಿತ್ರದುರ್ಗದ ಪ್ರಾಚೀನ ಪರಿಸರದಲ್ಲಿಯೇ ಅತ್ಯಂತ ದೊಡ್ಡದಾದ ಪ್ರಾಚ್ಯ ಸ್ಮಾರಕ. ಹಾಗೆಯೇ ಚಿತ್ರದುರ್ಗ ನಗರದ ಪಶ್ಚಿಮ ಹೊರವಲಯದಲ್ಲಿ ದಾವಣಗೆರೆಗೆ ಹೋಗುವ ರಸ್ತೆಯಲ್ಲಿ ಬಂದರೆ, ವಿಶಾಲವಾದ ಆವರಣದಲ್ಲಿ ಎತ್ತರವಾಗಿ ನಿಂತಿರುವ ಮಹಾದ್ವಾರ, ಒಳಗೆ ಪ್ರವೇಶಿಸಿದರೆ ಅಲ್ಲಿ ಮತ್ತೊಂದು ಬೃಹತ್ ಕಟ್ಟಡ, ಒಳಗೆ ಬಂದರೆ, ನಾಲ್ಕು ದಿಕ್ಕುಗಳಲ್ಲಿಯೂ ಕಲ್ಲಿನ ಸಾಲುಕಂಬಗಳಿರುವ ರಾಜಾಂಗಣ, ಅದರ ದಕ್ಷಿಣಕ್ಕೆ ಪ್ರಾಚೀನವಾದ ಕರ್ತೃಗದ್ದುಗೆ, ಅದರ ಸುತ್ತ ಚೌಕಾಕಾರವಾಗಿ ಅನೇಕ ಅಂಕಣಗಳ ಕಟ್ಟಡಸಂಕೀರ್ಣ, ಇವೇ ಮುಂತಾದವು ನೋಡುಗರ ಮನಸ್ಸನ್ನು ಸೆಳೆಯುತ್ತವೆ. ಇದೇ ಬೆಟ್ಟದ ಕೆಳಗಿರುವ ಮುರುಘರಾಜೇಂದ್ರ ಬೃಹನ್ಮಠ. ಮುಂದೆ ಹಿಂದೆ ಎರಡು ಕೆರೆಗಳು, ಬಲಗಡೆ ಸುಂದರವಾದ ಉದ್ಯಾನವನ, ಎಡಗಡೆ ಸುಂದರವಾದ ತೆಂಗಿನ ತಂಪು ತೋಟ, ಎಲ್ಲೆಲ್ಲೂ ಶಾಂತತೆ- ಇಂತಹ ಸುಂದರ ಪ್ರಶಾಂತ ಪರಿಸರದಲ್ಲಿ ಕರ್ನಾಟಕದ ಪ್ರಸಿದ್ಧ ಮಠಗಳಲ್ಲಿ ಒಂದಾದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠವು ನೆಲೆಗೊಂಡಿದೆ. ಕರ್ನಾಟಕದ, ಅಷ್ಟೇ ಏಕೆ, ದಕ್ಷಿಣ ಭಾರತದ ಧಾರ್ಮಿಕ ಇತಿಹಾಸದಲ್ಲಿ ಒಂದು ಉಜ್ವಲ ಹೆಸರು ಚಿತ್ರದುರ್ಗದ ಬೃಹನ್ಮಠದ್ದು. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ರಂಗಗಳಲ್ಲಿ ತನ್ನನ್ನು ತೊಡಗಿಸಿಕೊಂಡು, ನಾಡಿನ ಮುನ್ನಡೆಯಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಈ ಮಠದ ಇತಿಹಾಸ ಬಹು ವಿಸ್ತಾರವಾದದ್ದು. ಚಿತ್ರದುರ್ಗದಲ್ಲಿ ಈ ಮಠ ಸ್ಥಾಪನೆಗೊಂಡ ಕಾಲದಿಂದ ನೋಡುವುದಾದರೆ, ಮೂರು ಶತಮಾನಗಳಿಗೂ ಹೆಚ್ಚಿನ ಗಣ್ಯ ಪರಂಪರೆಯನ್ನು ಇದು ಹೊಂದಿದೆ.
ಶೂನ್ಯಪೀಠ ಪರಂಪರೆ ಮುರಿಗೆ ಮಠ, ಮುರಿಗಾ ಮಠ, ಮುರುಗಿ ಮಠ, ಮುರುಘಾ ಮಠ, ಮುರುಘರಾಜೇಂದ್ರ ಮಠ, ವಿಶಾಲಮಠ, ಮಹಾಮಠ, ಬೃಹನ್ಮಠ ಮುಂತಾದ ವಿವಿಧ ಬಗೆಯ ಹೆಸರುಗಳ ಈ ಮಠ, ಕ್ರಿ.ಶ. ೧೨ನೆಯ ಶತಮಾನದ ಮಹಾಶರಣರಾದ ಅಲ್ಲಮಪ್ರಭುವಿನಿಂದ ಮೊದಲುಗೊಂಡು ಚೆನ್ನಬಸವಣ್ಣನವರಿಂದ ಮತ್ತು ಇನ್ನು ಹಲವರಿಂದ ಮುಂದುವರಿದು ಬಂದು ‘ಶೂನ್ಯಪೀಠ' ಎಂದು ಹೆಸರಾಗಿದೆ. ಇಲ್ಲಿ ‘ಶೂನ್ಯಪೀಠ' ಎಂಬ ಹೆಸರಿನ ಅರ್ಥ ಮತ್ತು ಮಹತ್ತ್ವವನ್ನು ಸ್ವಲ್ಪ ಪರಿಶೀಲಿಸಬೇಕಾಗುತ್ತದೆ. ಬಸವಣ್ಣನವರು ಕ್ರಿ.ಶ. ೧೨ನೇ ಶತಮಾನದಲ್ಲಿ ಶೂನ್ಯಸಿಂಹಾಸನವನ್ನು ರಚಿಸಿದರೆಂದು, ಅದರ ಮೊದಲ ಅಧ್ಯಕ್ಷರಾಗಿ ಅಲ್ಲಮಪ್ರಭುದೇವರು ಅದನ್ನು ಏರಿದರೆಂದು, ವೀರಶೈವ ಸಾಹಿತ್ಯದಿಂದ ತಿಳಿಯುತ್ತದೆ. ಈ ಸಿಂಹಾಸನ ಸ್ಥೂಲವೂ ಭೌತಿಕವೂ ಆದುದಾಗಿತ್ತೇ? ಅಥವಾ ಸೂಕ್ಷ್ಮವೂ ಸಾಂಕೇತಿಕವೂ ಆದುದಾಗಿತ್ತೇ? ಈ ಬಗ್ಗೆ ಜಿಜ್ಞಾಸೆ ನಡೆದದ್ದುಂಟು. ಆ ವಿಷಯ ಏನಾದರೂ ಇರಲಿ, ಅದನ್ನು ಆಧ್ಯಾತ್ಮಿಕ ಸಿದ್ಧಿಯ ಉನ್ನತ ನಿಲವಿನ ಸಾಂಕೇತಿಕ ಸ್ಥಾನ ಎಂದು ಭಾವಿಸುವುದು ಉಚಿತ ಎನಿಸುತ್ತದೆ. ಆದರೆ ಶೂನ್ಯಪೀಠದ ಪರಂಪರೆಯನ್ನು ವಿವರಿಸುವ ಕೆಲವು ಆಕರಗಳಲ್ಲಿ ಅದು ಒಂದು ಭೌತಿಕ ಸ್ಥೂಲ ಪೀಠವಾಗಿತ್ತೇನೋ ಎಂಬಂತೆ ಸೂಚಿಸಿರುವುದೂ ಇಷ್ಟರ ಜೊತೆಗೆ ಅದನ್ನು ಶಿಖಾ ಶೈಲ ಮುದ್ರೆ ಮೊದಲಾದವುಗಳ ಜೊತೆಗಿನ ಒಂದು ವಸ್ತುವಾಗಿ ನಿರೂಪಿಸಿರುವುದೂ ಆಶ್ಚರ್ಯಕರವಾಗಿದೆ. ಹೀಗಾಗಿ ಶೂನ್ಯಪೀಠ ಪರಂಪರೆ ಎಂಬ ಮಾತನ್ನು ಅಲ್ಲಮಪ್ರಭುದೇವರ ಪರಂಪರೆ ಅಥವಾ ಶರಣರು ಪ್ರತಿಪಾದಿಸಿದ ಶೂನ್ಯತತ್ತ್ವದ ಮಾರ್ಗದ ಪರಂಪರೆ ಎನ್ನುವ ಅರ್ಥದಲ್ಲಿ ನಾವು ತೆಗೆದುಕೊಳ್ಳುವುದು ಸೂಕ್ತವಾಗಿ ಕಾಣುತ್ತದೆ. ಆ ದೃಷ್ಟಿಯಿಂದ ಆ ಹೆಸರು ಅದಕ್ಕೆ ಸಲ್ಲುತ್ತದೆ. ಅದರಿಂದ ಶೂನ್ಯಪೀಠ ಎಂಬುದಕ್ಕೆ ಯಾವುದೇ ಉತ್ಪ್ರೇಕ್ಷೆಯ ಭಾವುಕತೆಯ ಅವಾಸ್ತವಿಕತೆಯ ಸ್ಪರ್ಶ ಉಂಟಾಗುವುದು ತಪ್ಪಿದಂತಾಗುತ್ತದೆ. ಈ ದೃಷ್ಟಿಯಿಂದ ಶೂನ್ಯಪೀಠ ಪರಂಪರೆ' ಎಂಬ ಮಾತನ್ನು ಇಲ್ಲಿ ತೆಗೆದುಕೊಳ್ಳಲಾಗಿದೆ ನಮ್ಮ ನಮ್ಮ...
Read moreAn excellent place near Chitradurga on the way towards Hampi. This is a combination of a spiritual place, a museum, a mela where children can have joy rides while parents do some shopping, and a theme park based on the animal kingdom, freedom fighters and philosophers. You can spend a good afternoon here with children. First walk towards the Muruga Matha. Visit the museum thereafter, there is a nominal payment which is worth it. However there were urchins trying to steal chappals outside the Matha which there needs to be better security to handle. Walk into the theme park after that. There is a payment for this too which is even more worth it, especially with children. You can spend an hour in this park itself. Come outside and near the parking you will get good fancy items and utensils for purchase at...
Read moreHistorical, religious and prestigious Matt @ Chitradurga, Karnataka. Matt is guiding the society to get rid of superstitious beliefs and conducts number of events/programs in this regard. Basavasri Award is a very popular award conferred every year to personalities serving the man kind across the world across any field and any religion ! Shabana Azmi, Malala Yousafzai, PT Usha, Kiran Bedi, Shankar Bidri, Anna Azare, Dr. Sudarshan are few examples who received this prestigious award. Matt Runs educational institutions under SJM education Trust from LKG to medical & Engineering colleges.
Matt campus is developed with great vision of Swamiji and offers Dasoha (food) daily to thousands of devotees...
Read more