Kannarpady Temple, located near Udupi in Karnataka, is a rare temple because it is dedicated to the Jaya Durga form of Mother Goddess Shakti. This is one of the four important Goddess Durga temples in Udupi and it is mentioned in the Skanda Purana. Jaya Durga Parameshwari Temple at Kannarpady is situated near the National Highway 66 and is around 5 km south west of Udupi. Legend has it that a Sage Kanwa discovered the murti worshiped in the temple after Mother Goddess came in his dream and asked him to worship her.
It is also believed that once there was fight among the administrators of the temple and one group took away a Bali murti and installed it at Kannara Kuduru and another Bali murti was taken to Badanidiyoor. The murti of Goddess Jaya Durga is two-armed and she is in a benign form. Her hands are in blessing posture. Her Vahana, lion, can be seen in front of the murti. The sacred pond in the temple premises is known as Kanva Pushkarani.
The shrine is believed to be more than 5000 years old. The temple architecture is quite similar to other coastal Karnataka Temples. The sanctum sanctorum is constructed using black granite. The flooring of the sanctum is constructed using 2 pieces of lithostone. It absorbs water. In the inner premises of the temple there is a Teertha Mandapa. The important subsidiary deities worshipped in the temple are Ganesha, Subrahmanya, and Shasta. The most important festival observed here is the 9-day Navratri festival. The third day after Akshya Tritiya is when the annual temple festival is...
Read moreಶ್ರೀಜಯದುರ್ಗಾಪರಮೇಶ್ವರೀ ದೇವಸ್ಥಾನ - ಕನ್ನರಪಾಡಿ ಉಡುಪಿ.
ಮಂಗಳೂರಿನಿಂದ ಕುಂದಾಪುರದ ಕಡೆಗೆ ಪ್ರಯಾಣಿಸುವಾಗ, ರಾಷ್ಟೀಯ ಹೆದ್ದಾರಿ ೬೬ ರಲ್ಲಿ, ರಸ್ತೆಯ ಪಡುಬದಿಯಲ್ಲಿ ಸುಮಾರು ೧೦೦-೧೫೦ ಗಜಗಳಷ್ಟು ಅಂತರದಲ್ಲಿ ಶ್ರೀ ದೇವಳವು ಇರುವುದು. ದೇವಸ್ಥಾನದ ಪಕ್ಕದಲ್ಲಿಯೇ ಕಣ್ವ ಪುಷ್ಕರಿಣಿಇರುವುದು. ಶ್ರೀ ಜಯದುರ್ಗಾಪರಮೇಶ್ವರೀ ದೇವಾಲಯದ ಪ್ರಾಚೀನತೆಯನ್ನು ನಿರ್ಣಯಿಸಲು ಯಾವುದೇ ಶಿಲಾಶಾಸನಗಳಾಗಲೀ, ದಾಖಲೆಗಳಾಗಲೀ ಲಭ್ಯವಿರದ ಕಾರಣ, ಈ ದೇವಸ್ಥಾನದ ಪ್ರಾಚೀನತೆಯನ್ನು ಶಿಲಾಶಾಸನಗಳ ಯುಗಕ್ಕಿಂತಲೂ ಹಿಂದೆ ಒಯ್ಯಬೇಕಾಗುತ್ತದೆ. ಇತಿಹಾಸಕಾರರ ಅಭಿಪ್ರಾಯದಂತೆ ಇಲ್ಲಿಗೆ ಸಮೀಪವಿರುವ ಉದ್ಯಾವರವು ಹಿಂದೆ ಉದಯಪುರವೆಂದು ಕರೆಯಲ್ಪಡುತ್ತಿದ್ದು, ಅಲ್ಲಿ ಅಲುಪ ವಂಶದ ರಾಜರು ಕ್ರಿ.ಪೂ ಎರಡನೆಯ ಶತಮಾನದ ಲಾಗಾಯ್ತು ಆಳುತ್ತಿದ್ದರೆಂದು ಕಂಡುಬರುತ್ತದೆ. ಹಾಗಿರುವಾಗ ಈ ದೇವಸ್ಥಾನವು ಅದೇ ರಾಜಾಶ್ರಯ ಹಾಗು ಪೋಷಣೆಯಲ್ಲಿ ಅಂದಿನಿಂದಲೇ ಇತ್ತೆಂದು ನಂಬಿಕೆ. ಈ ದೇವಸ್ಥಾನದ ಧಾರ್ಮಿಕ ಮೂಲ: ಪ್ರಾಚೀನ ಕಾಲದಲ್ಲಿ ಕಣ್ವರೆಂಬ ಯತಿಶ್ರೇಷ್ಟರು ಈ ದೇವಸ್ಥಾನದ ಎದುರು ಬದಿಯಲ್ಲಿರುವ ಸರೋವರದ ಬಳಿ ವಾಸಿಸಿಕೊಂಡು ತಪಸ್ಸು ಮಾಡುತ್ತಾ ಇದ್ದ ಸಂದರ್ಭದಲ್ಲಿ ಒಂದು ದಿನ ಮುಂಜಾವಿನ ವೇಳೆ ಅವರಿಗೆ ದೇವಿಯು ಕನಸಿನಲ್ಲಿ ಬಂದು, ತಾನು ಜಯದುರ್ಗೆಯೆಂಬ ಅಭಿದಾನದಲ್ಲಿ ಇಲ್ಲಿಯೇ ನೆಲೆಸಿ, ನಿನ್ನಿಂದ ಪೂಜೆಯನ್ನು ಸ್ವೀಕರಿಸುವೆನೆಂದು ಹೇಳಿ ಅಂತರ್ಧಾನಳಾದಳಂತೆ. ಮುಂಜಾನೆ ಎಚ್ಚೆತ್ತ ಮುನಿಯರ್ವರು ಎದ್ದು ಹೊರ ಬಂದು ನೋಡುವಾಗ ತಾನು ಕನಸಿನಲ್ಲಿ ಕಂಡ ದೇವಿಯ ತದ್ರೂಪವನ್ನೇ ಹೋಲುವ ಶಿಲಾವಿಗ್ರಹವನ್ನು ಕಂಡು ಆನಂದಭರಿತರಾದರಂತೆ. ಕಾಲಕ್ರಮೇಣ, ಆ ಯತಿಗಳು ತಪಸ್ಸು ಮಾಡುತಿದ್ದ ಸ್ಥಳಕ್ಕೆ “ಕಣ್ವರಪಾಡಿ” ಎಂತಲೂ, ಆ ಸರೋವರಕ್ಕೆ “ಕಣ್ವ ಪುಷ್ಕರಿಣಿ” ಎಂತಲೂ ಹೆಸರಾಯಿತಂತೆ. ಒಂದು ಕಾಲದಲ್ಲಿ ಈಗಿನ ಅಜ್ಜರಕಾಡು ಅಬ್ಜಾರಣ್ಯವಾಗಿತ್ತೆಂತಲೂ, ಆ ಕಾಡಿನ ಅಂಚು ಈ ಸ್ಥಳವೇ ಆಗಿತ್ತೆಂತಲೂ, ಆಗ ಅದನ್ನು ಕಡೇಕಾಡು ಎಂದು ಕರೆಯುತ್ತಿದರೆಂದೂ, ಅದೇ ಈಗ ಕಡೇಕಾರು ಗ್ರಾಮವಾಗಿರುವುದೆಂದು ನಂಬಿಕೆ.
ಒಂದು ಕಾಲದಲ್ಲಿ ಈ ದೇವಾಲಯವು ಇಲ್ಲಿನ ಬ್ರಾಹ್ಮಣರ ಆಡಳಿತಕ್ಕೊಳಪಟ್ಟಿದ್ದು, ಆ ಬ್ರಾಹ್ಮಣ ಕುಲಕ್ಕೆ “ಕಣ್ವರಾಯ”, “ಕನ್ನರಾಯ” ಎಂದೆಲ್ಲ ಹೆಸರಿದ್ದು, ಆ ಕುಲದವರೇ ಆಗಿದ್ದ ಶಂಕರ ಕಣ್ವರಾಯ ಎಂಬುವವರು ತಮ್ಮ ಪತ್ನಿಯು ಯಾತ್ರೆ ಮಾಡಿದ ಬಗ್ಗೆ ಬಹುಶಃ ದೇವಿಯ ಬಲಿಮೂರ್ತಿಯನ್ನು ದೇವಿಗೆ ಒಪ್ಪಿಸಿರಬೇಕೆಂದು, ಈ ದೇವಸ್ಥಾನದ ಗರ್ಭಗೃಹದ ಬಲಬದಿಯ ಶಿಲಾಸ್ತಂಭದಲ್ಲಿರುವ ಕೆತ್ತನೆಯ ವಾಕ್ಯಗಳಿಂದ ಕಂಡು ಬರುವುದು. ಅದರಲ್ಲಿ ಬರೆದಿರುವ “ಶಂಕರ ಕಣ್ಣೂರಮ” ಎಂಬುದು ಶಂಕರ ಕಣ್ಣೂರಾಯ ಎಂದೇ ಆಗಿದ್ದಿರಬಹುದು. ಯಾಕೆಂದರೆ, ಆ ಶಾಸನದ ಕನ್ನಡ ಭಾಷೆಯ ಶೈಲಿಯಲ್ಲಿಯೂ, ಅಕ್ಷರಗಳು ಹಳೇಕನ್ನಡ ಬರಹದಂತಿರುವುದು. ಇತಿಹಾಸಕಾರರ ಪ್ರಕಾರ ಈ ಶಾಸನವು ಸುಮಾರು ೧೬,೧೭ನೇ ಶತಮಾನದ್ದಾಗಿರುವುದು.
ದುರ್ಗಾಸಪ್ತಶತೀ ನಾಲ್ಕನೇ ಅಧ್ಯಾಯದ ಧ್ಯಾನ ಶ್ಲೋಕದಲ್ಲಿ ಹೇಳಿರುವಂತೆ ಶ್ರೀದೇವಿಯು ಇಲ್ಲಿನ ಮೂಲ ಬಿಂಬದಲ್ಲಿ ಸನ್ನಿಹಿತಳಾಗಿ ಭಕ್ತರಿಂದ ಆರಾಧನೆಗೊಳ್ಳುತ್ತಿದ್ದಾಳೆ.
ಕನ್ನರ್ಪಾಡಿಯ ಈ ದೇವಿಯ ಮೂರ್ತಿಯು; ದೇವಿಮಹಾತ್ಮೆಯ ೪ನೇ ಅಧ್ಯಾಯದಲ್ಲಿ ಹೇಳುವಂತೆ, ಶಿರದ ಮೇಲೆ ಚಂದ್ರ, ತ್ರಿನೇತ್ರ, ಚತುರ್ಭುಜೆ; ಒಂದೊಂದು ಕೈಯಲ್ಲಿ ಶಂಖ,ಚಕ್ರ, ಕೃಪಾಣ ಹಾಗೂ ಅಗ್ನಿತ್ರಿಶಖೆ ಧರಿಸಿ, ಸಿಂಹಕ್ಕೆ ಒರಗಿ ನಿಂತಿರುವಳು. “ದುರ್ಗೆಯರಲ್ಲಿ ಹಲವು ರೂಪಗಳಿವೆ. ಆದರೆ, ನವದುರ್ಗೆಯರಾಗಿಯೇ ಪ್ರಚಲಿತವಿರುವ ಈ ದೇವಿ ಸಂಕುಲ ಒಂಭತ್ತೇ ಇರುತ್ತದೆ”.
ಅಸುರರನ್ನು ಸಂಹರಿಸಿ, ಜಯಗಳಿಸಿ ಭಕ್ತರನ್ನು ಪೊರೆಯಲು ನೆಲೆಸಿರುವ ಶಾಂತಿಸ್ವರೂಪಿಣಿ ದೇವಿಯೇ ಈ ಜಯದುರ್ಗೆ. ಉದಿಯಾವರದಲ್ಲಿ ಆಳಿದ ಅಲೂಪ ರಾಜರ ಕೋಟೆಯ ಈಶಾನ್ಯ ದಿಶೆಯಲ್ಲಿರುವ ಈ ಜಯದುರ್ಗಾದ ರಕ್ಷಕ ದೇವತೆಯೆನಿಸಿ ಜಯದುರ್ಗಾ ನಾಮಾಂಕಿತಳಾಗಿರಬೇಕು. ೫೧ ಶಕ್ತಿಪೀಠಗಳೊಲ್ಲಂದಾಗಿರುವ ಬಂಗಾಳದ ಬರ್ದ್ವಾನ್ ನಲ್ಲಿ ತ್ರಿಶೂಲವನ್ನು ಹಿಡಿದಿರುವ ಜಯದುರ್ಗಾ ದೇವಿಯನ್ನು ಮತ್ತೆ ನಾವು ಅಲ್ಲಿ ಕಾಣಬಹುದು. ಮತ್ತೊಂದು ವಿಶೇಷತೆಯೆಂದರೆ ಕನ್ನರ್ಪಾಡಿ ಜಯದುರ್ಗಾ ದೇವಿಯ ಧ್ಯಾನಶ್ಲೋಕ ಹಾಗೂ ಪಶ್ಚಿಮ ಬಂಗಾಳದ ಬರ್ದ್ವಾನ್ ನಲ್ಲಿರುವ ಜಯದುರ್ಗಾದೇವಿಯ ಧ್ಯಾನಶ್ಲೋಕವು ಒಂದೇ ಆಗಿರುತ್ತದೆ.
ದೇವಸ್ಥಾನದ ಒಳಪ್ರಾಂಗಣದಲ್ಲಿ, ಚತುರಸ್ರ ಆಕಾರದ ತೀರ್ಥಮಂಟಪವಿದೆ. ಗರ್ಭಗೃಹವು ಮಧ್ಯಕಾಲೀನ ಚತುರಸ್ರ ಕಗ್ಗಲ್ಲಿನಿಂದ ರಚನೆಯಾಗಿದೆ. ಈ ದೇವಸ್ಥಾನದ ಗರ್ಭಗುಡಿಯ ವಿಶೇಷವೆಂದರೆ, ಗರ್ಭಗುಡಿಯ ಒಳಬದಿಯ ನೆಲವು ತ್ರಿಕೋಣಕಾರದ ಎರಡು ಶಿಲೆಗಳ ತುಂಡುಗಳಿಂದ ಹಾಸಲ್ಪಟ್ಟಿದ್ದು ಅದರ ಮೇಲೆ ಭವ್ಯವಾದ ಶಿಲಾಮೂರ್ತಿಯಿದೆ. ಈ ನೆಲಕ್ಕೆ ಹಾಸಿದ ಶಿಲೆಯು ಬಹಳ ನಯವಾಗಿದ್ದು, ಒಂದು ತೊಟ್ಟು ನೀರು ಬಿದ್ದರೂ ಹರಿದುಹೋಗುವ ರೀತಿಯಲ್ಲಿ ಕುಳ್ಳಿರಿಸಲಾಗಿದೆಯಂತೆ.
ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮಲ್ಲಿಗೆ ಹೂವು ಹಾಗೂ ರೇಷ್ಮೆ ಸೀರೆಯನ್ನು ಶ್ರೀದೇವಿಗೆ ಹರಕೆಯಾಗಿ ಒಪ್ಪಿಸುವುದು ಇಲ್ಲಿಯ ಸಂಪ್ರದಾಯ.
ಸಂಪರ್ಕ ವಿಳಾಸ: ಶ್ರೀ ಜಯದುರ್ಗಾಪರಮೇಶ್ವರೀ ದೇವಸ್ಥಾನ, ಕನ್ನರ್ಪಾಡಿ, ಕಡೆಕಾರು ಅಂಚೆ ಉಡುಪಿ ತಾಲೂಕು,...
Read moreSri Jayadurga Parameshwari temple is a Goddess Vanadurga temple located at Kanarpady, Udupi district of Karnataka. The temple is located to the Northeast of Udyavara.On either sides of the door, idols of Lord Mahaganapathi and Lord Subramanya were installed recently. In the surroundings of the temple are installed Nandikeshwara on the southern side, Raktheshwari, Nagadevaru and Brahmastaana on the Western side and Kallukuttiga and Kshetrapaala on the...
Read more