ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮೈಸೂರು
ಕರ್ನಾಟಕ ರಾಜ್ಯದಲ್ಲಿರುವ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ಇಲಾಖೆಯು 1885ರಲ್ಲಿ ಬಿ. ಎಲ್. ರೈಸ್‍ರವರನ್ನು ನಿರ್ದೇಶಕರನ್ನಾಗಿ ಅಂದಿನ ಮೈಸೂರು ಸಂಸ್ಥಾನದ ಸರ್ಕಾರ ನೇಮಕ ಮಾಡುವುದರೊಂದಿಗೆ ಪ್ರಾರಂಭಗೊಂಡಿತು. ಈ ಇಲಾಖೆಯು ಭಾರತದ ಯಾವುದೇ ರಾಜ್ಯದ ಪ್ರಾಚ್ಯವಸ್ತು ಇಲಾಖೆಗಿಂತ ಅತ್ಯಂತ ಹಳೆಯದಾಗಿದೆ. ರೈಸ್‍ರವರು ಪ್ರಮುಖವಾಗಿ ಶಾಸನಗಳ ಸರ್ವೇಕ್ಷಣೆಯ ಕಾರ್ಯದಲ್ಲಿ ಇಲಾಖೆಯನ್ನು ತೊಡಗಿಸಿ ಅಂದಿನ ಮೈಸೂರು ಸಂಸ್ಥಾನದ 8 ಜಿಲ್ಲೆಗಳು ಮತ್ತು ಕೊಡಗು ಜಿಲ್ಲೆಯಲ್ಲಿ ದೊರೆತ ಒಟ್ಟು 9000 ಶಾಸನಗಳನ್ನು ಪ್ರತಿಮಾಡಿ ಇವುಗಳನ್ನು ಎಪಿಗ್ರಾಫಿಯಾ ಕರ್ನಾಟಿಕ ಸಂಪುಟಗಳಲ್ಲಿ ಪ್ರಕಟಿಸಿದರು. ಇವರ ನಂತರ ನಿರ್ದೇಶಕರಾದ ಶ್ರೀ. ಆರ್. ನರಸಿಂಹಚಾರ್‍ರವರು ಹೊಸದಾಗಿ ಪತ್ತೆ ಮಾಡಿದ 4000 ಶಾಸನಗಳನ್ನು ಪ್ರತಿ ಮಾಡಿ ಅವುಗಳನ್ನು ಪ್ರಕಟಿಸಿದರು. ಆರ್. ನರಸಿಂಹಚಾರ್‍ರವರು ಪ್ರಕಟಿಸಿರುವ ಶ್ರವಣಬೆಳಗೊಳದ ಶಾಸನ ಸಂಪುಟ, ಶಾಸನ ಸಂಪುಟಗಳ ಪ್ರಕಟಣೆಗೆ ಮಾದರಿಯಾಗುವಂತಹ ಶ್ರೇಷ್ಠ ಪ್ರಕಟಣೆ. ಇವರು ಅಸಂಖ್ಯಾತ ಸ್ಮಾರಕಗಳನ್ನು ಸರ್ವೇಕ್ಷಣೆ ಮಾಡಿ ಅವುಗಳ ಸಂಕ್ಷಿಪ್ತ ವಿವರಗಳನ್ನೊಳಗೊಂಡ ವರದಿಗಳನ್ನು ಇಲಾಖೆಯ ವಾರ್ಷಿಕ ವರದಿಗಳಲ್ಲಿ ಮುದ್ರಿಸಿದರು. ಇವು ಆನಂತರದ ಇಲಾಖೆಯ ವರದಿಗಳಿಗೆ ಮಾದರಿಯಾದವು. ಇವರ ತರುವಾಯ ಶ್ರೀ ಆರ್. ಶಾಮಾಶಾಸ್ತ್ರಿಯವರು ಇಲಾಖೆಯ ನಿರ್ದೇಶಕರಾದರು. ಕೌಟಿಲ್ಯನ ಅರ್ಥಶಾಸ್ತ್ರವನ್ನು ಮೊಟ್ಟಮೊದಲಿಗೆ ಸಾರಸ್ವತ ಲೋಕಕ್ಕೆ ಪರಿಚಯ ಮಾಡಿಕೊಟ್ಟ ಹೆಗ್ಗಳಿಕೆ ಇವರದು. ಆರ್. ನರಸಿಂಹಾಚಾರ್ಯರು ಹೊರತಂದ ಮೈಸೂರು ಪುರಾತತ್ವ ವರದಿ ಮಾದರಿಯಲ್ಲಿ ಡಾ. ಎಂ. ಹೆಚ್. ಕೃಷ್ಣರವರು ಇಲಾಖಾ ವರದಿಗಳನ್ನು ಉತ್ತಮ ರೀತಿಯಲ್ಲಿ ಅವು ಆಕರ ಗ್ರಂಥಗಳಾಗುವಂತೆ ರಚಿಸಿ ಪ್ರಕಟಿಸಲು ಪ್ರಾರಂಭಿಸಿದರು. ವಿಶ್ವಾದ್ಯಂತ ಪ್ರಶಂಸೆಗೆ ಒಳಪಟ್ಟ ವಾರ್ಷಿಕ ಮೈಸೂರು ಪುರಾತತ್ವ ವರದಿಗಳ ಹೊಸಶ್ರೇಣಿಯನ್ನು 1928ನೇ ವರ್ಷದಿಂದ ಹೊರತಂದ ಡಾ. ಎಂ. ಎಚ್. ಕೃಷ್ಣರವರು ಅವುಗಳಲ್ಲಿ ಸ್ಮಾರಕಗಳ ವಿವರಣೆ, ಸಂರಕ್ಷಣಾ ಕಾರ್ಯ, ಹೊಸ ಶಾಸನಗಳು, ನಾಣ್ಯಗಳು, ಹಸ್ತಪ್ರತಿಗಳು ಮತ್ತು ಇಲಾಖೆಯ ಆಡಳಿತಾತ್ಮಕ ವರದಿಯನ್ನು ಸಂಯೋಜಿಸಿದ್ದರು. ಇದು ಇಲಾಖೆಯ ವರದಿಗಳಿಗೆ ವಿಶ್ವಮಾನ್ಯತೆಯನ್ನು ಒದಗಿಸಿಕೊಟ್ಟಿತು. ಅಲ್ಲದೆ, ಇವು ಇಂದಿಗೂ ಸಂಶೋಧಕರ ಮೂಲ ಸಾಮಗ್ರಿಯಾಗಿ ಬಳಸ್ಪಡುತ್ತಿರುವುದು ಅವುಗಳ ಖ್ಯಾತಿಗೆ ಹಿಡಿದ ಕೈಗನ್ನಡಿಯಾಗಿದೆ. ಇವರ ಸೇವೆಯಿಂದ ಇಲಾಖೆಯು ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಯಿತು. ರಾಜ್ಯ ರಕ್ಷಿತ ಸ್ಮಾರಕಗಳ ಸಂರಕ್ಷಣೆಯನ್ನು ಕೈಗೊಳ್ಳಲು 1974ನೇ ವರ್ಷದಲ್ಲಿ ಸಂರಕ್ಷಣಾ ಶಾಖೆಯೊಂದನ್ನು ಇಲಾಖೆಯಲ್ಲಿ ಆರಂಭಿಸಲಾಯಿತು. ಆನಂತರದ ನಿರ್ದೇಶಕರ ಪೈಕಿ ಡಾ. ಶೇಷಾದ್ರಿಯವರ ಕೊಡುಗೆ ವಿಶೇಷವಾದುದು. ಇವರು ಉತ್ಖನನ ಮಾಡಿದ ಟಿ. ನರಸಿಪುರ ನೂತನ ಶಿಲಾಯುಗದ ನೆಲೆಯು ದಕ್ಷಿಣ ಭಾರತ ನೂತನ ಶಿಲಾಯುಗದ ನೆಲೆಗಳ ಕಾಲಮಾನವನ್ನು ನಿರ್ಧರಿಸುವುದರಲ್ಲಿ ಮಹತ್ವದ ಪಾತ್ರ ನಿರ್ವಹಿತು. ಇವರ ಕಾಲದಲ್ಲಿ ಪ್ರಾಚೀನ ನಿವೇಶನಾನ್ವೇಷಣೆ ಮತ್ತು ಉತ್ಖನನ ಕಾರ್ಯಕ್ಕೆ ಹೆಚ್ಚು ಒತ್ತು ನೀಡಲಾಯಿತು. ಇವರ ತರುವಾಯ ನಿರ್ದೇಶಕರಾದ ಡಾ. ಎಂ. ಎಸ್. ನಾಗರಾಜರಾವ್‍ರವರ ಕಾಲದಲ್ಲಿ ಸಹ ಇದೇ ಬಗೆಯ ಕಾರ್ಯಗಳು ಮುಂದುವರೆದವು. ಡಾ. ಎಂ. ಎಸ್. ನಾಗರಾಜರಾವ್ ಸಂಗನಕಲ್ಲು, ತಡಕನ ಹಳ್ಳಿ, ಕೊಮರನಹಳ್ಳಿ ಮತ್ತು ಹಳ್ಳೂರುಗಳಲ್ಲಿ ಭೂಉತ್ಖನನಗಳನ್ನು ಕೈಗೊಂಡು ಅಲ್ಲಿ ಸೂಕ್ಷ್ಮಶಿಲಾಯುಗ, ನೂತನಶಿಲಾಯುಗ ಮತ್ತು ಬೃಹತ್ ಶಿಲಾಯುಗದ ನೆಲೆಗಳನ್ನು ಬೆಳಕಿಗೆ ತಂದರು. ಹಳ್ಳೂರು ಉತ್ಖನನ ದಕ್ಷಿಣ ಭಾರತದ ಕಬ್ಬಿಣ ಯುಗದ ಅತ್ಯಂತ ಪ್ರಾಚೀನ ನೆಲೆಯಾಗಿ ಕಂಡುಬಂದುದು ಇಲ್ಲಿನ ವಿಶೇಷ. ಇವರು ಪ್ರಾರಂಭಿಸಿದ ಹಂಪಿ ಪುನರುತ್ಥಾನ ಯೋಜನೆಯಿಂದಾಗಿ ಇಂದು ಹಂಪಿ ವಿಶ್ವಪರಂಪರೆಯ ಸ್ಮಾರಕಗಳಲ್ಲಿ ಒಂದಾಗಿ ಪರಿವರ್ತಿತಗೊಂಡಿದೆ.
ಕರ್ನಾಟಕ ರಾಜ್ಯವು ಅತ್ಯಂತ ಪುರಾತನ ಸ್ಮಾರಕಗಳನ್ನು ಹೊಂದಿದ್ದು, ಸಾಂಸ್ಕøತಿಕ ನೆಲೆಗಳನ್ನು ಹಾಗೂ ತನ್ನದೇ ಆದ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ. ಕ್ರಿ. ಪೂ. 10000 ವರ್ಷಗಳಿಗೂ ಹಿಂದಿನ ಪ್ರಾಗೈತಿಹಾಸಿಕ ನೆಲೆಗಳ ಹಾಗೂ ಆದಿ ಮಾನವರು ಶಿಲೆಯಲ್ಲಿ ಕೊರೆದಿರುವ ಚಿತ್ರಗಳು ಸಹ ಉಳಿದುಕೊಂಡು ಬಂದಿವೆ.
ಕರ್ನಾಟಕವನ್ನಾಳಿದ ಪ್ರಭಾವಶಾಲಿ ರಾಜಮನೆತನಗಳು ಅವರ ಆಳ್ವಿಕೆಯ ಅವಧಿಯಲ್ಲಿ ಅನೇಕ ಸ್ಮಾರಕಗಳನ್ನು ಸಾಂಸ್ಕøತಿಕ ಕುರುಹನ್ನಾಗಿ ಅವರ ಮುಂದಿನ ಪೀಳಿಗೆಗೆ ಉಳಿಸಿ ಹೋಗಿರುತ್ತಾರೆ. ಈ ರಾಜಮನೆತನಗಳಲ್ಲಿ ಪ್ರಮುಖವಾದವುಗಳೆಂದರೆ ಕದಂಬರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು. ವಿಜಯನಗರದ ಅರಸರು, ಮೈಸೂರು ಒಡೆಯರು, ಮುಸ್ಲಿಂ ರಾಜಮನೆತನಗಳಲ್ಲಿ ಬಹಮನಿ, ಆದಿಲ್ ಶಾಹಿ, ಬರಿದ್‍ಶಾಹಿಗಳು ಪ್ರಮುಖರು. ಕರ್ನಾಟಕದಲ್ಲಿ ಸುಮಾರು 25000-30000 ಅಘೋಷಿತ ಸ್ಮಾರಕಗಳಿವೆ. ರಾಜ್ಯದಲ್ಲಿರುವ ರಾಜ್ಯ ಸಂರಕ್ಷಿತ ಸ್ಮಾರಕಗಳ ಸಂಖ್ಯೆ: 832
ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯವನ್ನು ಮತ್ತು 2004ರಲ್ಲಿ ಹೊಸದಾಗಿ ಆರಂಭಗೊಂಡ ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಬೆಂಗಳೂರು, ಈ ಇಲಾಖೆಗಳನ್ನು ಸರ್ಕಾರಿ ಆದೇಶದ ಸಂಖ್ಯೆ: ಕಸಂವಾಪ್ರ 10 ಕೆಎಂಯು 2012 ದಿನಾಂಕ 23-2-2012ರ ಮೇರೆಗೆ ಈ ಎರಡೂ ಇಲಾಖೆಗಳನ್ನು ವಿಲೀನಗೊಳಿಸಿ ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಎಂಬುದಾಗಿ ಪುನರ್‍ರಚಿಸಿರುತ್ತದೆ. ಇಲಾಖಾ ಮುಖ್ಯಸ್ಥರನ್ನಾಗಿ ಆಯುಕ್ತರನ್ನು ನೇಮಿಸಲಾಗಿದೆ.
ಇಲಾಖೆಯ ಆಡಳಿತದ ವ್ಯಾಪ್ತಿಯಲ್ಲಿ ಮೈಸೂರು (ಪರಂಪರೆ), ಮಂಗಳೂರು, ಬೆಂಗಳೂರು, ಧಾರವಾಡ ಹಾಗೂ ಕಮಲಾಪುರ (ಹಂಪಿ)ಯಲ್ಲಿ ಉಪನಿರ್ದೇಶಕರ ಕಛೇರಿಗಳು ಇವೆ. ಬೆಂಗಳೂರು, ಚಿತ್ರದುರ್ಗ, ಶಿವಮೊಗ್ಗ, ಮೈಸೂರು, ಶ್ರೀರಂಗಪಟ್ಟಣ ಹಾಸನ, ಮಡಿಕೇರಿ, ಮಂಗಳೂರು, ಕಿತ್ತೂರು, ಗದಗ, ಗುಲ್ಬರ್ಗಾ, ರಾಯಚೂರು, ಹೂವಿನಹಡಗಲಿ ಸೇರಿದಂತೆ ಒಟ್ಟು ಹದಿಮೂರು ಸಂಗ್ರಹಾಲಯಗಳಿವೆ ಹಾಗೂ ಬೆಂಗಳೂರಿನ ವೆಂಕಟಪ್ಪ ಚಿತ್ರಶಾಲೆ ಮತ್ತು ಅಥಣಿಯಲ್ಲಿ ಶಿಲ್ಪಗಳ ಗ್ಯಾಲರಿಗಳಿವೆ. 128 ವರ್ಷಗಳ ಸುದೀರ್ಘ ಇತಿಹಾಸ...
Read moreNot as good as I was hoping for. Information plaques (which are rare in the first place) are switched between artifacts. Spellings are wrong in multiple places. (Male armour instead of Mail armour, for instance) Some pieces are missing translations, specially in the hallway to the sculpture room. Artifact names are wrong. Sword instead of punch dagger. Bullet instead of cannonball. The plaques are so generic - Painting. Gun. Sword. Drum. Flute. Bangles. Jewelry. Pottery. That's all you can learn from the plaques. It's not a museum, it's a pictionary.
Here's one word you can look up in the dictionary, Dept. Of Archeology, 'Juvenile!'.
A museum is a place to learn about our culture, history and the human story. It's not a place to gawk at random artifacts with multitudes of mistakes all over, and come out as a misinformed citizen. We should be proud of our heritage, and that includes collecting and dispersing knowledge that is irrefutable, verified, authentic and reliable.
Very poor job by the department.
PS: The sculptures and painting collections are very good, but missing vital information like dates, places of origin, or any other...
Read moreThis is archeological museum has two floor, ground floor houses some of the ancient relics from pre historic to recent past. You will find the items of Mohenjo-Daro to Chandravalli period. The way the things presented here needs an update. Needs a complete makeover, can be portrayed based on time line. There is a separate sculpture section. The main attraction being Halmidi inscription and Begur inscriptions. The top floor has interesting Mysuru artwork and Daccani art works. The audio guide system was also not available. Although it was present before. Needs to be updated. Behind the museum, you will find more sculptures in a open area put up for display. Overall, a great experience as a history enthusiast. You can visit, Vekantappa Art Galary, with the same ticket. The parking is not free, they charge nominal even after being a visitor...
Read more